SA Circle
 Join ... View
For any modifications, mail to:  srputtur@gmail.com

Do you have anything to share with the Blogger?, It will be helpful.
*Required
    Name *
    Your Name
    email ID *

    Your email ID (Will not be shared with anybody)
    Comments *
    Your Suggestions

August 12, 2011

ಕನ್ನಡದ ಕಣಜ

ವಿದ್ಯುನ್ಮಾನ ಮಾಧ್ಯಮದ ಮೂಲಕ ಕನ್ನಡ ಭಾಷೆಯಲ್ಲಿ ಎಲ್ಲ ಬಗೆಯ ಅರಿವಿನ ಹರಿವುಗಳು ಮುಕ್ತವಾಗಿ ಸಿಗುವಂತೆ ಮಾಡಲು ವ್ಯವಸ್ಥಿತ ಜಾಲತಾಣ ರೂಪಿಸುವ ಯೋಜನೆಯೊಂದಿಗೆ, ಇರುವ ಜ್ಞಾನದ ಸಂಗ್ರಹ, ಪರಿಷ್ಕಾರ ಮತ್ತು ಹೊಸ ಜ್ಞಾನದ ಸೃಷ್ಟಿ – ಮುಂತಾದ ಉದ್ದೇಶಗಳೊಂದಿಗೆ ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗವು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಕಾರದೊಂದಿಗೆ ಪರಿಕಲ್ಪಿಸಿ, ರೂಪಿಸಿದ್ದು ಇಂಟರ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ, ಬೆಂಗಳೂರು (ಐಐಐಟಿ-ಬಿ) ಇವರು ಜಾರಿಗೊಳಿಸಿರುವ ಯೋಜನೆ-ಕಣಜ.



ಉದ್ದೇಶಗಳು:

ಇದು ಕನ್ನಡ ಭಾಷೆಯಲ್ಲಿ ಯಾವುದೇ ಮಾಹಿತಿಗೆ ಏಕೈಕ ಮೂಲವಾಗುತ್ತದೆ. ಕರ್ನಾಟಕ ಜ್ಞಾನ ಆಯೋಗದ ಹೆಗ್ಗುರಿಯಾದ ಜ್ಞಾನಸಮಾಜದ ಸೃಷ್ಟಿಯ ದಿಕ್ಕಿನಲ್ಲಿ ಇದೊಂದು ಹೆಜ್ಜೆ.

ವಿವಿಧ ಸಂಸ್ಥೆ ಮತ್ತು ವ್ಯಕ್ತಿಗಳಿಂದ ಮಾಹಿತಿಗಳನ್ನು ಪಡೆದು ಅವುಗಳನ್ನು ಸಾರ್ವಜನಿಕ ಬಳಕೆಗಾಗಿ ಕನ್ನಡ ಭಾಷೆಯಲ್ಲಿ, ವಿದ್ಯುನ್ಮಾನ ರೂಪದಲ್ಲಿ, ವಿಶ್ವವ್ಯಾಪಿ ಜಾಲತಾಣದಲ್ಲಿ(www.kanaja.in) ಪ್ರಕಟಿಸುವುದು.

ಮಾಹಿತಿಗಳು ಆದಷ್ಟೂ ಅಧಿಕೃತವೂ, ಖಚಿತವೂ, ಸಂರ್ಣವೂ, ಗುಣಮಟ್ಟದ್ದೂ ಆಗಿರುವಂತೆ ತಜ್ಞರ ನೆರವನ್ನು ಪಡೆದು ಎಲ್ಲ ಮಾಹಿತಿಗಳನ್ನೂ ಪರಾಮರ್ಶೆಗೆ ಒಳಪಡಿಸಿಯೇ ಪ್ರಕಟಿಸುವುದು.

ಪಠ್ಯ, ಚಿತ್ರ, ಧ್ವನಿ ಮತ್ತು ಚಲನಚಿತ್ರ – ಹೀಗೆ ಬಹುಮಾಧ್ಯಮಗಳಲ್ಲಿ ಕನ್ನಡ ಮಾಹಿತಿಯನ್ನು ಪ್ರಕಟಿಸಲು ಬೇಕಾದ ಎಲ್ಲ ಮಾಹಿತಿ ಸಂಗ್ರಹ ಮತ್ತು ತಂತ್ರಜ್ಞಾನದ ಕ್ರಮಗಳನ್ನೂ ಕೈಗೊಳ್ಳುವುದು.

ದೃಷ್ಟಿಸವಾಲು ಎದುರಿಸುತ್ತಿರುವವರಿಗೂ (ಅಂಧತ್ವ) ಕಣಜದಿಂದ ಮಾಹಿತಿ ಪಡೆಯುವುದಕ್ಕೆ ಬೇಕಾದ ಸಾಧನಗಳನ್ನು ಅಳವಡಿಸಿಕೊಳ್ಳುವುದು.

ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನತೆ, ಉನ್ನತ ಶಿಕ್ಷಣ ಪಡೆದವರು ಅಥವಾ ಕನಿಷ್ಟ ಶಿಕ್ಷಣ ಪಡೆದವರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಸಾರ್ವಜನಿಕ ಸೇವಾನಿರತರು, ವೃತ್ತಿಪರರು ಮತ್ತು ಮನೆಕಾರ್ಯಗಳಲ್ಲಿ ನಿರತರಾಗಿರುವವರು – ಹೀಗೆ ಎಲ್ಲ ಸ್ತರದ ಜನರಿಗೂ ಮಾಹಿತಿಯು ದಕ್ಕುವಂತೆ ಶ್ರಮಿಸುವುದು.

ಪ್ರತಿಯೊಂದೂ ಮಾಹಿತಿಯನ್ನು ತತ್ಸಾಮಯಿಕವಾಗಿ ಸಿರಿವಂತಗೊಳಿಸಿ, ಸದಾಕಾಲವೂ ಸರಿಯಾದ ಮತ್ತು ಸಮಕಾಲೀನವಾದ ಮಾಹಿತಿ ದೊರಕುವಂತೆ ಮಾಡುವುದು.

ಅರಿವಿನ ದಾಖಲೆಗಳ ಪ್ರಕಟಣೆಯ ಜೊತೆಗೇ ವಿವಿಧ ಜ್ಞಾನಪ್ರವಾಹಗಳ ಸಂರಕ್ಷಣೆಗೆ ಶ್ರಮಿಸುವುದು.

ಕಣಜಕ್ಕೆ ಭೇಟಿ ನೀಡಿ



ಸಂಪರ್ಕ ವಿಳಾಸ:

ಸಲಹಾ ಸಮನ್ವಯಕಾರ

ಕಣಜ ಅಂತರಜಾಲ ಕನ್ನಡ ಜ್ಞಾನಕೋಶ, (ಕರ್ನಾಟಕ ಜ್ಞಾನ ಆಯೋಗದ ಯೋಜನೆ)

ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ- ಬೆಂಗಳೂರು

26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ, ಬೆಂಗಳೂರು 560100



ದೂರವಾಣಿ: 080-41407777 ಮೊಬೈಲ್: 9741976789

ಈ ಮೈಲ್: projectmanager@kanaja.in

0 comments:

Post a Comment